ಕೋವಿಡ-19 ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕಷ್ಟಗೊಳಿಸುವಲ್ಲಿ ಕಲಿಕೆ ಪ್ರಕ್ರಿಯೆಯಲ್ಲಿ ತೊಡಗುವ0ತೆ ಮಾಡಲು ಸಲಹೆ ಮತ್ತು ಕಾರ್ಯತ0ತ್ರಗಳ ಪಟ್ಟಿ
ಜಗತ್ತು ನಾಗಾಲೋಟದಲ್ಲಿ ಓಡುತ್ತಿರುವಾಗ ಪ್ರಕೃತಿ/ ಮಾನವರ ವಿಪರೀತ ಚಟುವಟಿಕೆಗಳು ನಮಗೆ ಪಾಠ ಕಲಿಸುತ್ತವೆ. ಇದೆ ಕರೋನಾ ತಂದೊಡ್ಡಿರುವ ಆತಂಕವಾಗಿದ್ದು ಜಗತ್ತು ನರಳಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ರೋಗವನ್ನು ಹತೋಟಿ ತರಲು ಹರಸಾಹಸ ಪಡುತ್ತಿದೆ. ಆದ್ದರಿಂದ ಶಿಕ್ಷಕರಿಗೆ ಮನೆಯಲ್ಲಿಯೇ ಕೆಲಸ ಮಾಡಲು ತಿಳಿಸಿದೆ.
ಸರಕಾರವು ಲಾಕ್ ಡೌನ್, ಸೀಲ್ ಡೌನ್, ಕ್ವಾರೆಂಟನ್ ಎಂಬ ಕ್ರಮಗಳ ಮೂಲಕ ಕೋವಿಡ್-19 ಹರಡುವಿಕೆಯ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡಿದರೂ ಕೂಡ ಸೋಂಕು ಹೆಚ್ಚಾಗುತ್ತದೆ. ಇದಕ್ಕಾಗಿ ಆರ್ಥಿಕ ವಲಯ ಹಳಿ ತಪ್ಪಿ ಹೋಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ತುಂಬಾ ತೊಂದರೆಯಾಗಿದೆ ಇದರಲ್ಲಿ ಶಿಕ್ಷಣವೂ ದೇಶದ ಉನ್ನತಿಯಲ್ಲಿ ಪ್ರಮುಖವಾದರೂ ಪ್ರಸ್ತುತ ಅದು ಸಹ ಸ್ಥಬ್ಧವಾಗಿದೆ. ಮಕ್ಕಳ ಬಾವಿ ಭವಿಷ್ಯವನ್ನು ರೂಪಿಸ ಬೇಕಾಗಿದ್ದು ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕರಾದ ನಾವೆಲ್ಲರೂ ಮಕ್ಕಳ ಕಲಿಕೆಯನ್ನು ಹೇಗೆ ಉತ್ಕøಷ್ಟಗೊಳಿಸ ಬೇಕು ಎಂದು ಶಿಕ್ಷಕರಿಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಸೂಚನೆ ನೀಡಿರುವುದರಿಂದ ಕೋವಿಡ್-19 ಹರಡುವಿಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೆಲವು ಸೂಚನೆಗಳನ್ನು ನೀಡುತ್ತಿದ್ದೇನೆ.
ಸಲಹೆ-ಸೂಚನೆ:-
*ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ವೈರಸ್ ಕುರಿತು ಮಾಹಿತಿ ನೀಡುವುದು.
* ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಾಮಾಜಿಕ ಅಂತರ ಕಾಪಾಡಲು ತಿಳಿಸುವುದು.
* ಮನೆಯಿಂದ ಹೊರಗಡೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಬಳಸಲು ಸೂಚಿಸುವುದು. &ಸ್ಯಾನಿಟೇಜರ್ ಬಳಸಲು ತಿಳಿಸುವುದು.
• ಸತತವಾಗಿ ಕೈ ತೊಳೆಯಲು ತಿಳಿಸುವುದು.
• ಬಿಸಿ ನೀರು, ಬಿಸಿ ಆಹಾರ ತಿನ್ನುವುದು, ಕಷಾಯ ಕುಡಿಯಲು ತಿಳಿಸುವುದು.
• ವಿದ್ಯಾರ್ಥಿಗಳ ಮೊಬೈಲ್ ನಂಬರ್ ಗಳನ್ನು ಸಂಗ್ರಹಿಸಿ ಮನೆಗೆಲಸ ನೀಡುವುದು.
• ತರಗತಿವಾರು ಮನೆಗೆಲಸದ ವೇಳಾಪಟ್ಟಿಯನ್ನು ತಯಾರಿಸಿ ಮನೆಯಲ್ಲಿಯೇ ಓದಲು ಪ್ರೇರೇಪಿಸುವುದು.
• ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಲು ಕಥೆ ಪುಸ್ತಕ ಸಂಗ್ರಹಿಸಲು ಹೇಳುವುದು.
• ಪಠ್ಯದಲ್ಲಿ ಬರುವ ಸೂತ್ರಗಳನ್ನು ಕಂಠಪಾಠ ಮಾಡಲು ತಿಳಿಸುವುದು.
• ದೂರವಾಣಿ ಮೂಲಕ ವಿದ್ಯಾರ್ಥಿಗಳಿಗೆ & ಪಾಲಕರಿಗೆ ನಿರಂತರ ಶೈಕ್ಷಣಿಕ ಸಮಾಲೋಚನೆ ನಡೆಸುವುದು.
• ಯೂಟೂಬ್ & ದೀಕ್ಷಾ ಯ್ಯಾಪ್ ಮೂಲಕ ಪಠ್ಯದ ವಿಷಯ ನೋಡಿ ಕೇಳಲು ತಿಳಿಸುವುದು
• ಆಗಾಗ ಸಾಬೂನಿನಿಂದ ಕೈ ತೊಳೆಯಲು ತಿಲಿಸುವುದು.
• ಉಪ್ಪು ಮಿಶ್ರಿತ ನೀರನ್ನು ಗಾರ್ಗಲ್ ಮಾಡಲು ತಿಳಿಸುವುದು.
• ಮಾಧ್ಯಮದ ಮೂಲಕ ಸರಕಾರ ನೀಡುವ ಸಲಹೆ ಸೂಚನೆಗಳನ್ನು ಅನುಸರಿಸಲು ತಿಳಿಸುವುದು.
• ಮನೆಯಿಂದ ಹೊರ ಹೋಗದಂತೆ ಇರುವುದು.
• ಮ್ಯಾಪ್ ಬಿಡಿಸಲು ತಿಳಿಸುವುದು.
• ಎಲ್ಲಾ ವಿದ್ಯಾರ್ಥಿಗಳು ವಂಶವೃಕ್ಷವನ್ನು ರಚಿಸಿ ಪಾಲಕರ ಸಹಿ ಪಡೆಯಲು ತಿಳಿಸುವುದು.
• ದಿನಾಲೂ ಕಾಪಿ ಪುಸ್ತಕವನ್ನು ಬರೆಯಲು ತಿಳಿಸುವುದು.
• ಇತಿಹಾಸದ ಇಸ್ವಿಗಳ ಮಹತ್ವ ಬರೆಯಲು ತಿಳಿಸುವುದು.
• ಕವಿ ಕೃತಿ ಪರಿಚಯ ಬರೆಯಲು ತಿಳಿಸುವುದು.
• ದೂರದರ್ಶನದಲ್ಲಿ ಬರುವ ಥಟ್ ಅಂತ ಹೇಳಿ, ಮಹಾಭಾರತ, ರಾಮಾಯಣ, ಮಕ್ಕಳ ವಾಣಿ ಕಾರ್ಯಕ್ರಮ ನೋಡಲು ತಿಳಿಸುವುದು.
ಹೀಗೆ ಮಕ್ಕಳಿಗೆ ಕಲಿಕೆಯನ್ನು ಉತ್ಕøಷ್ಟತೆಗೊಳಿಸಲು ಅನೇಕ ಕಾರ್ಯ ಯೋಜನೆಗಳನ್ನು ಶಿಕ್ಷಕರು ಕೈಗೊಂಡು ಮಕ್ಕಳ ಕಲಿಕೆಯ ಸಾಧನೆಯನ್ನು ಉತ್ತಮ ಪಡಿಸಲು ಇವು ಸಹಾಯಕವಾಗಿವೆ.
No comments:
Post a Comment