Friday, July 31, 2020
Thursday, July 30, 2020
Wednesday, July 29, 2020
ASSIGNMENT-10,.
ಕೋವಿಡ-19 ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕಷ್ಟಗೊಳಿಸುವಲ್ಲಿ ಕಲಿಕೆ ಪ್ರಕ್ರಿಯೆಯಲ್ಲಿ ತೊಡಗುವ0ತೆ ಮಾಡಲು ಸಲಹೆ ಮತ್ತು ಕಾರ್ಯತ0ತ್ರಗಳ ಪಟ್ಟಿ
ಜಗತ್ತು ನಾಗಾಲೋಟದಲ್ಲಿ ಓಡುತ್ತಿರುವಾಗ ಪ್ರಕೃತಿ/ ಮಾನವರ ವಿಪರೀತ ಚಟುವಟಿಕೆಗಳು ನಮಗೆ ಪಾಠ ಕಲಿಸುತ್ತವೆ. ಇದೆ ಕರೋನಾ ತಂದೊಡ್ಡಿರುವ ಆತಂಕವಾಗಿದ್ದು ಜಗತ್ತು ನರಳಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ರೋಗವನ್ನು ಹತೋಟಿ ತರಲು ಹರಸಾಹಸ ಪಡುತ್ತಿದೆ. ಆದ್ದರಿಂದ ಶಿಕ್ಷಕರಿಗೆ ಮನೆಯಲ್ಲಿಯೇ ಕೆಲಸ ಮಾಡಲು ತಿಳಿಸಿದೆ.
ASSIGNMENT-9,
ಸದರಿ ಮನೆಯಿ0ದ ಕೆಲಸದಡಿಯಲ್ಲಿ ನಮ್ಮ ವೃತ್ತಿನೈಪುಣ್ಯತೆ ಹೆಚ್ಚಿಸಿಕೊ0ಡ ಕುರಿತ ಬರಹ (400 ಪದಗಳು)
ಕಲಿಕೆ ಎನ್ನುವುದು ನಿಂತ ನೀರಲ್ಲ. ಅದು ಹರಿಯುವ ನೀರಿದ್ದಂತೆ. ಹಾಗೆಯೇ ವಿದ್ಯೆ ಎಂಬುದು
ಎಂದಿಗೂ ಮುಗಿಯದ ಅಧ್ಯಾಯ, ಅದೊಂದು ನಿರಂತರ ಪ್ರಕ್ರಿಯೆ ಎನ್ನುವ ನುಡಿಯು ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕ ಯಾವಾಗಲೂ ಸಮಾಜವನ್ನು ತಿದ್ದುವ, ದೇಶವನ್ನು ಕಟ್ಟುವ ನಿರ್ಮಾತೃ, ಇಂತಹ ಶಿಕ್ಷಕನ ಕಲಿಕೆಯು ಕ್ಷಣಿಕವಾಗಿ ನಿಂತರೆ ಮುಂದಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿ “ಒಬ್ಬ ಉತ್ತಮ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿರುತ್ತಾನೆ” ಎಂಬ ಮಾತನ್ನು ಕೇಳಿದ್ದೇವೆ.
ಯಾವುದೇ ದೇಶದಲ್ಲಿ ಶಿಕ್ಷಕರಿಗೆ ನೀಡುವ ಶೈಕ್ಷಣಿಕ ಸವಲತ್ತುಗಳನ್ನು & ಅವರನ್ನು ನಡೆಸಿ ಕೊಳ್ಳುವ ರೀತಿ ಶಿಕ್ಷಕರ ಸಾಮಥ್ರ್ಯವನ್ನು ಅಳೆಯುತ್ತದೆ. ಶೈಕ್ಷಣಿಕ ದೂರದೃಷ್ಟಿ ಹೊಂದಿರುವ , ಉತ್ತಮ ವ್ಯವಸ್ಥೆ ಕಲ್ಪಿಸಿದ ದೇಶ ಉತ್ತಮ ಶಿಕ್ಷಣಕ್ಕೆ ಮುನ್ನುಡಿ ಬರೆಯುತ್ತದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಹಲವಾರು ಅಡೆತಡೆಗಳು/ ಅನಾನುಕೂಲಗಳ ಮಧ್ಯೆ ಶಿಕ್ಷಕ ತನ್ನ ವೃತ್ತಿ ನೈಪುಣ್ಯತೆಯ ಜ್ಞಾನ & ಕೌಶಲವನ್ನು ವೃದ್ಧಿಸಿ ಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಅಣಿಯಾಗುವುದು ಇಂದು ಶಿಕ್ಷಕರಿಗೆ ಸವಾಲಾಗಿದ.
ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳು ಹೊಸದೇನಲ್ಲ. ಕಲಿಕೆಯಲ್ಲಿ ತೀವ್ರಗತಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಲೇ ಇರುತ್ತದೆ.ತೀವ್ರ ಆರ್ಥಿಕ ಸಂಪನ್ಮೂಲದ ಹೊಳೆಯನ್ನು ಹರಿಸುತ್ತದೆ. ಕರ್ನಾಟಕದಲ್ಲಿ ಇತ್ತೀಚಿಗೆ ಜಾರಿಗೆ ತಂದ ತಂತ್ರಜ್ಞಾನ ಆಧಾರಿತ ತರಬೇತಿಗಳು ಶಿಕ್ಷಕರನ್ನು ಈಗಿನ ವ್ಯವಸ್ಥೆಗೆ ಅಣಿಗೊಳಿಸಿದೆ.
ಇಂದು ಕೋವಿಡ್-19 ಪ್ರಪಂಚವನ್ನೇ ಆವರಿಸುವುದರಿಂದ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಮುನ್ನೆಡಸುವುದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳಲಿಕ್ಕೆ ಈ ಕೆಳಕಂಡ ವಿಧಾನಗಳನ್ನು ಅನುಸರಿಸ ಬೇಕಾದ ಅನಿವಾರ್ಯತೆಯಿದೆ
• ಪಾಠೋಪಕರಣಗಳ ತಯಾರಿಕೆ:-
• ತಂತ್ರಜ್ಞಾನ ಆಧಾರಿತ ಶಿಕ್ಷಣ ಕಲಿಕೆ:-
ಕಂಪ್ಯೂಟರ್ ಮೂಲಭೂತ ಪರಿಕಲ್ಪನೆಗಳ ಕಲಿಕೆ ಮೂಲಕ ಶಿಕ್ಷಕರು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳಬಹುದು.
• ಯೂಟೂಬ್/ ಆನ್ಲೈನ್ ಶೈಕ್ಷಣಿಕ ಕಾರ್ಯಕ್ರಮಗಳ ವೀಕ್ಷಣೆ:-
ಉದಾ:- ಪ್ರಯೋಗಗಳು, ಆಕಾಶಕಾಯಗಳ ವೀಕ್ಷಣೆ, ಭೂಮಿ ರಚನೆ,
• ಆಕರ ಗ್ರಂಥಗಳನ್ನು ಓದುವುದು:-
ನಾವು ಬೋಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಆಕರ ಗ್ರಂಥಗಳನ್ನು ಗ್ರಂಥಾಲಯಗಳಿಂದ ತಂದು ಓದಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳ ಬಹುದು.
ಉದಾ:-ಪದವಿಯ ಹಲವಾರು ಆಧಾರ ಗ್ರಂಥಗಳು.
• ಆನ್ಲೈನ್ ತರಬೇತಿ:-
ಉದಾ:- ಮೈಕ್ರೋಸಾಪ್ಟ್ ಟೀಮ್, ಜೂಮ್, ಗೂಗಲ್ ಮೀಟ್
• ವೃತ್ತ ಪತ್ರಿಕೆಗಳ ಅಧ್ಯಯನ:-
ದೂರದರ್ಶನದಲ್ಲಿ ಪ್ರಸಾರವಾಗುವ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳಲಿಕ್ಕೆ ಸಹಾಯಕವಾಗಿದೆ.
ಉದಾ:- ಚಂದನ ಟಿ.ವಿ.ಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮ, ಸೇತುಬಂಧ ಕಾರ್ಯಕ್ರಮ, ಮಕ್ಕಳ ವಾಣಿ, ಡಿ.ಎಸ್,ಇ.ಆರ್.ಟಿ. ಜ್ಞಾನ ದೀಪ ಕಾರ್ಯಕ್ರಮ
-
ಸದರಿ ಮನೆಯಿ 0 ದ ಕೆಲಸದಡಿಯಲ್ಲಿ ನಮ್ಮ ವೃತ್ತಿನೈಪುಣ್ಯತೆ ಹೆಚ್ಚಿಸಿಕೊ 0 ಡ ಕುರಿತ ಬರಹ ...
-
ಕೋವಿಡ-19 ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕಷ್ಟಗೊಳಿಸುವಲ್ಲಿ ಕಲಿಕೆ ಪ್ರಕ್ರಿಯೆಯಲ್ಲಿ ತೊಡಗುವ0ತೆ ಮಾಡಲು ಸಲಹೆ ಮತ್ತು ಕಾರ್ಯತ0ತ್ರಗಳ ಪಟ್ಟಿ ...
-
ಏಷ್ಯಾ ಖಂಡ ದಕ್ಷಿಣ ಭಾರತದ ಪ್ರಮುಖ ರಾಜಮನೆತನಗಳು ಹೊಯ್ಸಳರು ದೆಹಲಿ ಸುಲ್ತಾನರು ಮರಾಠರು- ಶಿವಾಜಿ ಜೈನ ಧರ್ಮ ಮತ್ತು ಬೌದ್ಧ ಧರ್ಮ ಭಕ್ತಿ ಪರಂಪರೆ ಯೂರೋಪ್ ಖಂಡ ಜೀವ...











